ENGLISH

ಸಾಹಸ ಕ್ರೀಡೆಗಳು - ದಸರಾ ಹಬ್ಬ - 2019


Event Schedule


ಕ್ರಸ

ವಿವರ

ಸ್ಥಳ/ವರದಿ ಮಾಡಿಕೊಳ್ಳಬೇಕಾದ ಸ್ಥಳ

ದರ

ದಿನಗಳು

ಷರಾ

1

ರ್ಯಾಫ್ಟಿಂಗ್

ಮಯೂರ ಕೆ.ಎಸ್.ಟಿ.ಡಿ.ಸಿ. ಹೋಟೆಲ್, ಶ್ರೀರಂಗಪಟ್ಟಣ

Rs. 200.00

29-09-2019 ರಿಂದ 08-10-2019

ಪ್ರತಿ ದಿನ ಬೆಳಿಗ್ಗೆ 9.00 ರಿಂ 5.00

ಕಾವೇರಿ ನದಿಯಲ್ಲಿ ವೈಟ್ ವಾಟರ್ ರಿವರ್ ರ್ಯಾಫ್ಟಿಂಗ್‍ನ್ನು ಶ್ರೀರಂಗಪಟ್ಟಣದ ಮಯೂರ ಕೆ.ಎಸ್.ಟಿ.ಡಿ.ಸಿ. ಹೋಟೆಲ್‍ನಿಂದ ತ್ರಿವೇಣಿ ಸಂಗಮದವರೆಗೆ ಸುಮಾರು 3.5 ಕಿಲೋಮೀಟರ್ ಆಯೋಜಿಸಲಾಗುವುದು. ರ್ಯಾಫ್ಟಿಂಗ್ ಮಾಡುವ ಪ್ರವಾಸಿಗರಿಗೆ ರ್ಯಾಫ್ಟಿಂಗ್ ಮಾರ್ಗದಲ್ಲಿ ಸಿಗುವ ಚಾರಿತ್ರ್ಯಿಕ ಸ್ಥಳಗಳ ದೃಶ್ಯ-ಶ್ರಾವ್ಯ ಮಾರ್ಗದರ್ಶಿಯು ಈ ಕಾರ್ಯಕ್ರಮದ ವಿಶೇಷತೆಯಾಗಿದೆ. ಈ ವ್ಯವಸ್ಥೆಯಡಿ ಕಾವೇರಿ ನದಿ ದಂಡೆಯಲ್ಲಿ ಸಿಗುವ ಗ್ಯಾರಿಸನ್ ಸಿಮೆಟ್ರಿ, ದೀವಾನ್ ಪೂರ್ಣಯ್ಯನವರ ಮನೆ, ಸ್ಕಾಟ್ಸ್ ಬಂಗಲೆ, ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ, ಚಿಕ್ಕ ಮತ್ತು ದೊಡ್ಡ ಗೋಸಾಯಿ ಘಾಟ್‍ಗಳು ಹಾಗೂ ತ್ರಿವೇಣಿ ಸಂಗಮದ ಕುರಿತು ಮೌಲ್ಯಯುತ ಮಾಹಿತಿ ನೀಡಲಾಗುವುದು.

2

ಜೆಟ್ ಸ್ಕೀ

ಕೆ.ಆರ್.ಎಸ್. ಹಿನ್ನೀರು, ಬ್ಲ್ಯೂ ಲಗೂನ್ ಹತ್ತಿರ, ಹೊಸ ಇಂಡುವಾಡಿ, ಕೆ.ಆರ್.ಎಸ್. ರಸ್ತೆ, ಮೈಸೂರು

Rs. 200

29-09-2019 ರಿಂದ 08-10-2019

ಪ್ರತಿ ದಿನ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 12.30 ಹಾಗೂ ಮಧ್ಯಾಹ್ನ 2.00 ರಿಂದ ಸಂಜೆ 5.00

ಕೃಷ್ಣರಾಜ ಸಾಗರದ ಹಿನ್ನೀರು ಪ್ರದೇಶದ ಸುಂದರ ವಾತಾವರಣದಲ್ಲಿ ಮೈನವಿರೇಳಿಸುವ ವಿವಿಧ ಜಲಸಾಹಸ ಕ್ರೀಡೆಗಳನ್ನು ಒಂದೇ ಸ್ಥಳದಲ್ಲಿ ಆಸ್ವಾದಿಸುವ ಅವಕಾಶ ಪ್ರವಾಸಿಗರಿಗೆ ದೊರೆಯಲಿದೆ. ಹೊಸ ಇಂಡುವಾಡಿಯ ಮನಮೋಹಕ ಬ್ಲೂ ಲಗೂನ್ ಸಮೀಪದಲ್ಲಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಪರಿಣತ ಗೈಡ್‍ಗಳ ಮೇಲ್ವಿಚಾರಣೆಯಲ್ಲಿ ರಿಯಾಯಿತಿ ದರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

3

ಸ್ಪೀಡ್ ಬೋಟ್

Rs. 100

4

ಬನಾನ ರೈಡ್

Rs. 100

5

ಕಯಾಕಿಂಗ್

Rs. 50

6

ಕೆನೋಯಿಂಗ್

Rs. 50

7

ಸ್ಥಿರ ನೀರಿನ ರ್ಯಾಫ್ಟಿಂಗ್

Rs. 50

8

ಆಕ್ವಾ ಸ್ಲೈಡ್

Rs. 100

9

ವಾಟರ್ ಜೋರ್ಬ್

Rs. 100

10

ಝಿಪ್ ಲೈನ್

ಚಾಮುಂಡಿ ಬೆಟ್ಟದ ಪಾದ, ಮೈಸೂರು

Rs. 00

29-09-2019 ರಿಂದ 08-10-2019
ಪ್ರತಿ ದಿನ ಬೆಳಿಗ್ಗೆ 10.00 ರಿಂದ ಸಂಜೆ 5.00

ಎತ್ತರದ ಸ್ಥಳದಲ್ಲಿ ಕಟ್ಟಲಾದ ರೋಪ್ ವೇ ಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹಗ್ಗದ ಮೂಲಕ ಜಾರಿಕೊಂಡು ತೆರಳುವ ಝಿಪ್ ಲೈನ್ ಮತ್ತು ಬೃಹತ್ ಬಂಡೆಯ ತುದಿಯಿಂದ ಲಂಭವಾಗಿ ನಡೆಯುವ ರೋಮಾಂಚನಕಾರಿ ರ್ಯಾಪೆಲ್ಲಿಂಗ್ ನ ಅನುಭವ ಅಪೂರ್ವವಾದುದು.

11

ರ್ಯಾಪೆಲ್ಲಿಂಗ್
(ಶಿಲಾ ಅವರೋಹಣ)

Rs. 00

12

ಚಾಮುಂಡಿ ಬೆಟ್ಟದಲ್ಲಿ ಸಾಹಸ ಮತ್ತು ಪ್ರಕೃತಿ ಅಧ್ಯಯನ-ಮಕ್ಕಳಿಗೆ ಮಾತ್ರ (ದಿನಕ್ಕೊಂದು ಬ್ಯಾಚ್‍ನಂತೆ)
(8 ವರ್ಷದಿಂದ 15 ವರ್ಷ)

ಬೆಳಿಗ್ಗೆ 7.00 ಗಂಟೆಗೆ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನೋಂದಾವಣೆ

100

29-09-2019 ರಿಂದ 08-10-201

ಪ್ರತಿ ದಿನ ಬೆಳಿಗ್ಗೆ 7.00 ರಿಂದ ಮಧ್ಯಾಹ್ನ 1.00

ಪ್ರತಿ ದಿನ 20 ಬಾಲಕ/ಬಾಲಕಿಯರಿಗೆ ಪರಿಣತ ಪ್ರಕೃತಿ ತಜ್ಞರು ಪ್ರಾಣಿ, ಪಕ್ಷಿ, ಕೀಟಗಳು, ಗಿಡ, ಮರ, ಬಳ್ಳಿಗಳ ಪರಿಚಯ ಮಾಡಿಕೊಡಲಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಕೃತಿಯ ಕುರಿತಾದ ಮಕ್ಕಳ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಒದಗಿಸುವುದರೊಂದಿಗೆ ಸಾಹಸ ಕ್ರೀಡೆಗಳ ಪರಿಚಯವನ್ನೂ ಸಹ ಮಾಡಿಕೊಡಲಾಗುವುದು. ಮಕ್ಕಳಲ್ಲಿ ಪ್ರಕೃತಿ ರಕ್ಷಣೆ ಕುರಿತು ಸದ್ಭಾವನೆ ಮೂಡಿಸಲು ಹಾಗೂ ಸಾಹಸ ಪ್ರವೃತ್ತಿಯನ್ನು ಉತ್ತೇಜಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಅರ್ಧ ದಿನದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳನ್ನು ಅವರ ಪೋಷಕರು ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಬಿಡಬೇಕಾಗುವುದು/ಕರೆದುಕೊಂಡು ಹೋಗಬೇಕಾಗುವುದು. ಕಾರ್ಯಕ್ರಮದ ನೋಂದಾವಣಿ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದಿನಾಂಕ: 27-09-2019 ರಿಂದ 07-10-2019 ರವರೆಗೆ ಪ್ರತಿ ದಿನ ಬೆಳಿಗ್ಗೆ 7.00 ರಿಂದ 10.00 ರವರೆಗೆ ನಡೆಯಲಿರುವುದು. ಆನ್‍ಲೈನ್‍ಲ್ಲಿ ನೋಂದಾವಣೆಯು ದಿನಾಂಕ: 21-09-2019 ರಿಂದ ಕೆಳಕಾಣಿಸಿದ ವೆಬ್‍ಸೈಟ್‍ನಲ್ಲಿ ಆರಂಭಗೊಳ್ಳುವುದು. www.gethnaa.com

13

ಬಾಡಿ ಝೋರ್ಬ್-ಮಕ್ಕಳಿಗೆ ಮಾತ್ರ
(8 ವರ್ಷದಿಂದ 15 ವರ್ಷ) 

ಹಾಕಿ ಮೈದಾನ, ಚಾಮುಂಡಿ ವಿಹಾರ ಕ್ರೀಡಾಂಗಣ, ಮೈಸೂರು

 

29-09-2019 ರಿಂದ 01-10-20
ಹಾಗೂ 05-10-2019 ರಿಂದ 08-10-2019

ಪ್ರತಿ ದಿನ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00

ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದ ಕೃತಕ ಹಾಕಿ ಟರ್ಫ್ ನ ಮೇಲೆ ಆಯೋಜಿಸಲಾಗುವ ಬಾಡಿ ಝೋರ್ಬಿಂಗ್ ಮಕ್ಕಳಿಗೆ ಅಪಾರ ಮನರಂಜನೆ ಒದಗಿಸಲಿದ್ದು, ಮೈಸೂರಿನಲ್ಲಿ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ.


ಸ್ಪರ್ಧೆಗಳು


ಕ್ರಸ

ವಿವರ

ಸ್ಥಳ/ವರದಿ ಮಾಡಿಕೊಳ್ಳಬೇಕಾದ ಸ್ಥಳ

ದರ

ದಿನಗಳು

ಷರಾ

1

ಮೆಟ್ಟಿಲುಗಳು ಹತ್ತುವುದು

ಚಾಮುಂಡಿ ಬೆಟ್ಟದ ಮೊದಲನೇ ಮೆಟ್ಟಿಲು, ಮೈಸೂರು

Rs. 00

04-10-2019
At 7.00 AM

ಚಾಮುಂಡಿ ಬೆಟ್ಟವನ್ನು ಹತ್ತುವ ಮೂಲಕ ನಿಮ್ಮ ದೈಹಿಕ ಕ್ಷಮತೆಯನ್ನು ಸವಾಲಿಗೊಡ್ಡಲು ಸಿದ್ಧರಾಗಿರಿ. ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತುವ ಸ್ಪರ್ಧೆಗಳನ್ನು ಆರು ಪ್ರತ್ಯೇಕ ವಿಭಾಗಗಳಲ್ಲಿ ಆಯೋಜಿಸಲಾಗುವುದು. (ಮಕ್ಕಳು, ವಯಸ್ಕರು ಮತ್ತು ಹಿರಿಯ ನಾಗರಿಕರು) (ಮಹಿಳಾ ಮತ್ತು ಪುರುಷರ ವಿಭಾಗ)

2

ರಿವರ್ ರ್ಯಾಫ್ಟಿಂಗ್

ಮಯೂರ ಕೆ.ಎಸ್.ಟಿ.ಡಿ.ಸಿ. ಹೋಟೆಲ್, ಶ್ರೀರಂಗಪಟ್ಟಣ

Rs. 300

03-10-2019
At 9.30 AM

ಪರಿಣತ ಜಲಸಾಹಸಿಗರು ತಮ್ಮ ಕೌಶಲ್ಯವನ್ನು ಸ್ಪರ್ಧೆಗೊಡ್ಡಲು ಅವಕಾಶ ಕಲ್ಪಿಸುವ ಮೂಲಕ ಕಾವೇರಿ ನದಿಯಲ್ಲಿ ರೋಮಾಂಚನಕಾರಿ ವೈಟ್ ವಾಟರ್ ರ್ಯಾಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಪರಿಣತ ರ್ಯಾಫ್ಟರ್‍ಗಳನ್ನು ಮೈಸೂರಿಗೆ ಆಹ್ವಾನಿಸುತ್ತಿದ್ದೇವೆ. ವಿಜೇತರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುವುದು.


Fit India ಸದೃಢ ಭಾರತ ಮಕ್ಕಳ ಕ್ರೀಡ


್ರಸ

ಕ್ರೀಡೆಯ ವಿವರ

ಸ್ಥಳ

ದಿನಗಳು

ಷರಾ

1

ಕ್ರೀಡಾರೋಹಣ

ಕುಪ್ಪಣ್ಣ ಪಾರ್ಕ್, ಮೈಸೂರು

29-09-2019 ರಿಂದ 08-10-2019
ಪ್ರತಿ ದಿನ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 12.30 ಹಾಗೂ ಮಧ್ಯಾಹ್ನ 2.00 ರಿಂದ ಸಂಜೆ 5.00

ಭಾರತದ ಸನ್ಮಾನ್ಯ ಪ್ರಧಾನ ಮಂತ್ರಿಯವರ ‘ಸದೃಢ ಭಾರತ’ ಅಭಿಯಾನದ (Fit India Movement) ಸಂದೇಶವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಬಾಲಕ/ಬಾಲಕಿಯರನ್ನು ಕ್ರೀಡೆಗಳತ್ತ ಆಕರ್ಷಿಸಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ರೀಡೆಗಳ ಕಿರು ಅಂಕಣಗಳನ್ನು ರೂಪಿಸಿ, ಕ್ರೀಡಾ ಪ್ರದರ್ಶನಗಳನ್ನು ಆಯೋಜಿಸಲಾಗುವುದು.

2

ಫೆನ್ಸಿಂಗ್

3

ಬಾಕ್ಸಿಂಗ್

4

ಹಾಕಿ

5

ಕುಸ್ತಿ

6

ಬಾಸ್ಕೆಟ್‍ಬಾಲ್